ಪುನೀತ್ ಅಭಿಮಾನಿಗಳಿಗೆ ಗುಡ್ ನ್ಯೂಸ್.. 'ಜೇಮ್ಸ್' ಅಧಿಕೃತ ಟೀಸರ್ ಬಿಡುಗಡೆ ಡೇಟ್ ಫಿಕ್ಸ್

James Movie Teaser: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 'ಜೇಮ್ಸ್‌' ಸಿನಿಮಾಗಾಗಿ ಎಲ್ಲರೂ ಕಾತುರರಾಗಿದ್ದಾರೆ. ಅಪ್ಪು ಅವರ ಕೊನೆಯ ಸಿನಿಮಾ 'ಜೇಮ್ಸ್‌' ಅಧಿಕೃತ ಟೀಸರ್ ಬಿಡುಗಡೆ ಡೇಟ್ ಫಿಕ್ಸ್  ಆಗಿದೆ. 

Edited by - Chetana Devarmani | Last Updated : Feb 5, 2022, 04:47 PM IST
  • ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 'ಜೇಮ್ಸ್‌' ಸಿನಿಮಾ
  • ಅಪ್ಪು ಅವರ ಕೊನೆಯ ಸಿನಿಮಾ 'ಜೇಮ್ಸ್‌'
  • 'ಜೇಮ್ಸ್‌' ಅಧಿಕೃತ ಟೀಸರ್ ಬಿಡುಗಡೆ ಡೇಟ್ ಫಿಕ್ಸ್
ಪುನೀತ್ ಅಭಿಮಾನಿಗಳಿಗೆ ಗುಡ್ ನ್ಯೂಸ್.. 'ಜೇಮ್ಸ್' ಅಧಿಕೃತ ಟೀಸರ್ ಬಿಡುಗಡೆ ಡೇಟ್ ಫಿಕ್ಸ್  title=
ಜೇಮ್ಸ್‌

ನಟ ಪುನೀತ್​ ರಾಜ್​ಕುಮಾರ್ (Puneeth Rajkumar)​ ಅಭಿನಯದ 'ಜೇಮ್ಸ್​'ಗಾಗಿ (James) ಸಿನಿ ಪ್ರಿಯರು ಕಾದು ಕುಳಿತಿದ್ದಾರೆ. ಚೇತನ್​ ಕುಮಾರ್​ ನಿರ್ದೇಶನದ ಈ ಚಿತ್ರದ ಪೋಸ್ಟರ್​ಗಳನ್ನು ಕಂಡು ಫ್ಯಾನ್ಸ್​ ಥ್ರಿಲ್​ ಆಗಿದ್ದಾರೆ. ಇದೀಗ 'ಜೇಮ್ಸ್​' ಟೀಸರ್​ ಬಿಡುಗಡೆಗೆ ಚಿತ್ರತಂಡ ದಿನಾಂಕ ನಿಗದಿ ಮಾಡಿದೆ. 

ಇದನ್ನೂ ಓದಿ: Hrithik Roshan: ಮತ್ತೊಮ್ಮೆ ಸಬಾ ಜೊತೆ ಕಾಣಿಸಿಕೊಂಡ ಹೃತಿಕ್ ರೋಷನ್..!

ಈ ಕುರಿತು ಪುನೀತ್ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ (Ashwini Puneeth Rajkumar) ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 

&

ಪಿಆರ್‌ಕೆ ಆಡಿಯೋದಲ್ಲಿ ಈ ಟೀಸರ್ ರಿಲೀಸ್ ಆಗಲಿದ್ದು, ಚೇತನ್‌ ಕುಮಾರ್ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಚಿತ್ರವನ್ನು ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಚಿತ್ರದ ಡಬ್ ಮಾಡುವ ಮೊದಲೇ ಅಪ್ಪು ವಿಧಿವಶರಾದ ಕಾರಣ, ನಟ ಶಿವರಾಜ್‌ಕುಮಾರ್ ಧ್ವನಿ ನೀಡಿದ್ದಾರೆ. ಫೆಬ್ರವರಿ 11 ರಂದು ಬೆಳಿಗ್ಗೆ 11.11 ಕ್ಕೆ ಜೇಮ್ಸ್ ಅಧಿಕೃತ ಟೀಸರ್ (James Movie Teaser) ಬಿಡುಗಡೆಯಾಗಲಿದೆ.

ಇದನ್ನೂ ಓದಿ: ‘ಕೆಜಿಎಫ್‌-2ʼ ನಟಿಯಿಂದ ಬಿಗ್‌ ಅಪ್‌ಡೇಟ್..! ಕನ್ನಡದ ಸಿನಿಮಾಗಾಗಿ ಕಾಯುತ್ತಿದೆ ಜಗತ್ತು..!

ಜನವರಿ 26 ರಂದು ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾದ ಪೋಸ್ಟರ್​ನಲ್ಲಿ (James Poster) ಪುನೀತ್​ ರಾಜ್​ಕುಮಾರ್​ ಅವರು ಯೋಧನ ಗೆಟಪ್​​ನಲ್ಲಿ ಕಾಣಿಸಿಕೊಂಡಿದ್ದರು.

ಮಾರ್ಚ್ 17ರ ಅಪ್ಪು ಜನ್ಮದಿನದಂದು ಸಿನಿಮಾವನ್ನು ರಿಲೀಸ್ ಮಾಡಲು ಚಿತ್ರತಂಡ ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಈವರೆಗೆ 'ಜೇಮ್ಸ್​' ರಿಲೀಸ್​ ಡೇಟ್​ ಬಗ್ಗೆ ಅಧಿಕೃತವಾಗಿಘೋಷಣೆ ಆಗಿಲ್ಲ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
.

Trending News